Monday 28 February 2011

ಕಣ್ಣಂಚಿನ ಕಂಬನಿ


ನಿಶೆಯಲ್ಲಿ ಕಂಡ ಕನಸಿಗೆ 
ನಸುಕಿನಲಿ ನಲಿದಾಡಿ
ನನಸಾಗಿಸುವ ಮನದ ಕಲ್ಪನೆಗೆ ಓಗೊಟ್ಟು
ಕಂಗಳು ಕಲ್ಪಿಸಿದ ದಾರಿಯಲಿ ಸಾಗುತಿರಲು........
ಕಾಲ್ಪನಿಕವ ಕಲ್ಪಿಸಿತು ಕಾಲ.



ಮುಚ್ಚಿದ ಕಣ್ಣೊಳಗೆ ಕನಸು ಹೆಣೆದು
ಹೆಣೆದ ಕನಸಿನ ಹಾದಿ ಹಿಡಿದು,
ಆ ಕನಸಿಗೆ ನಸುಕಿನ ಕಿಚ್ಚಿಡಿದು,
ಆ ಹಾದಿ ಕವಲೊಡೆದು,
ಕವಲೊಡೆದ ದಾರಿಯಲಿ...........
ಕನಸಿನ ಹಾದಿಯಲಿ.............
ನನಸಾಗದ ಕನಸುಗಳಿಗೆ
ಕಣ್ಣಂಚಿನ ಕಂಬನಿ.

3 comments:

ಸಚೇತನ said...

adakke irabeku kanasu nanasauguvadakkintha nanasauguttade ennuva nashe ye ishtaa

ಸಚೇತನ said...

ಎಲ್ಲವೂ ಅಲ್ಲವೇನೋ !! ಎಲ್ಲರಿಗೂ ಕಂಬನಿಯನ್ನು ಘನಿಕರೀಸಲು ಸಾಧ್ಯವಿಲ್ಲ.!

ವೆಂಕಟೇಶ್ ಹೆಗಡೆ said...

ಕವಲೊಡೆದ ದಾರಿಯಲಿ...........
ಕನಸಿನ ಹಾದಿಯಲಿ.............
ನನಸಾಗದ ಕನಸುಗಳಿಗೆ
ಕಣ್ಣಂಚಿನ ಕಂಬನಿ.... nice lines