Monday 7 March 2011

ಬಾಳಿನಾಸೆ


ಬಾಳಿಗೆ ಬಾನೆತ್ತರಕ್ಕೆ ಬಾಳುವಾಸೆ.





ನಿಲುಕದ ನಕ್ಷತ್ರವ ಕೈ ನಿಡಿದು
ಕರದೊಳಗೆ ಕಾಪಾಡುವಾಸೆ.
ಬಯಲಿನಲಿ ಬಿತ್ತುವ ಬೀಜವನ್ನೆಲ್ಲಾ......
ಮೊಳೆಸುವಾಸೆ.
ಕಾರ್ಮುಗಿಲ ಹನಿಯನ್ನೆಲ್ಲಾ...........
ಮನದೊಡಲ ಕಂಬನಿಗೆ ತಂಪಾಗಿ ಧಾರೆಯೆರೆವಾಸೆ.
ಬಾನಳತೆಯ ಲೆಕ್ಕಿಸದೆ ಬಾಳುವ ಬಾಳ್ವೆಗೆ...
ಮೊಳೆವ ಬೀಜದ ವ್ರಕ್ಷವ ಆಸರೆಯಾಗಿ ಆಲಂಗಿಸುವಾಸೆ.
ಕಣ್ಣೀರ್ ಸುರಿಸಿ ನೊಂದ ಮನಕೆ.....
ಕರದೊಳಗೆ ಕಾಪಾಡಿದ ನಕ್ಷತ್ರದ ಕಾಂತಿ ಕೊಡುವಾಸೆ.


ಬಾಳಿಗೆ ಸಾಗರದಲೆ ಕೊನೆಯಾಗುವವರೆಗೆ.......... 
ಕಣ್ಣ್ ಕಂಪಿಸದೆ ಕಾಣುವಾಸೆ.

1 comment:

Nivedita Hegde said...

ಆಸೆಯಾ ಬೆ೦ಬತ್ತಿ ಹೊರಟಾ ಮನಸಿಗೆ ಆಸರೆ ಸಿಗಲಿ........
ನಿಲುಕದಾ ನಕ್ಷತ್ರ ನಿನ್ನಾಸೆಯಾ ಕ೦ಡು ಒಮ್ಮೆ ಭುವಿಗೆ ಬರಲಿ....
ನೊ೦ದಾ ಮನಸೆಲ್ಲಾ ನಿನ್ನೊಲವಾ ಮಡಿಲಲ್ಲಿ ನೋವೆಲ್ಲಾ ಮರೆಯಲಿ...
ಆ ನೊ೦ದಾ ಮನಸಿನಾ ಹಾರೈಕೆ ನಿನ್ನಾ ಬಾಳಿನುದಕ್ಕೂ ಬಾಳಿನಾಸಯನೆಲ್ಲಾ ವಾಸ್ತವವಾಗಿಸುತಿರಲಿ.........