Wednesday 9 March 2011

ಮನದಲ್ಲೊಂದು ಕನಸಿನ ಗೂಡು


ಕಂಡ ಕನಸಿಗೆ...
ಕಾಮನಬಿಲ್ಲಿನ ಬಣ್ಣ ತುಂಬಿ,
ಕಲ್ಪನೆಯ ಕುಡಿಕೆಯಲ್ಲಿ ಕಾಪಾಡಿ,
ಕಣ್ಣ್ ಬಿಟ್ಟು ಕಾಣಬೇಕೆನ್ನುವಷ್ಟರಲ್ಲಿ..........
ಕಣ್ಣೀರ ಧಾರೆಯಿಂದ ತೋಯ್ದು ಹೋಗಿತ್ತು.
ಮನದ ಕನಸಿನ ಗೂಡು
ಮಣ್ಣಿನ ಪಾಲಾಗಿತ್ತು,
ಮನದ ಕಲ್ಪನೆಯ ಮಣ್ಣಿನ ಮಡಿಕೆಯಲ್ಲಿ......
ಕಣ್ಣ್ಮರೆಯಾಗಿತ್ತು.

2 comments:

Nivedita Hegde said...

ಮತ್ತೆ ಮೂಡಿಬರಲಿ ಆ ಪುಟ್ಟ ಕಣ್ಣಲ್ಲಿ ಕನಸು
ಆ ಕನಸಿಗೆ ಕಾಮನಬಿಲ್ಲಿನ ಬಣ್ಣದಾ ಸೊಗಸು
ಮನದಲ್ಲಿ ತೇಲಿ ಬರುವುದು ಮತ್ತೊ೦ದು ಹುರುಪು
ಕಲ್ಪನೆಯಾ ಜಾಡೇ ಇಲ್ಲದೇ ಅದಾಗುವುದು ನನಸು

ಅಶ್ವಿನಿ ಸಂತೋಷ್ said...

ನಾ ಕಂಡ ಕನಸನ್ನು ನನಸು ಮಾಡಬೇಕೆಂಬ ನಿನ್ನ ಆಶಯಕ್ಕೆ ತುಂಬಾ ಧನ್ಯವಾದಗಳು.